Monday, April 18, 2016

Vijayavani News Paper Report on Summer School

ಸೈನ್ಸ್ ಫೋರ೦ ಬೇಸಿಗೆ ಶಾಲೆ
 25 ರಿ೦ದ ಮೇ 8ರವರೆಗೆ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಶಿಬಿರ 
ಭಾಗವಹಿಸಲಿರುವ ವಿಜ್ಞಾನಿಗಳು 
» ಡಾ.ಉಮೇಶ್ ವಾಗ್ಮಾರೆ 
» ಶ್ರೀರಾಘವನ್ 
» ಪ್ರೊ.ಎ೦.ಆರ್.ಎನ್.ಮೂತಿ೯ 
» ಪ್ರೊ.ಪಿ.ಎಲ್.ರಮೇಶ್ 
» ಪ್ರೊ.ಬಿ.ವಿ.ಶ್ರೀಧರ ಸ್ವಾಮಿ 
» ಪ್ರೊ.ಚ೦ದ್ರಭಾಸ್ ನಾರಾಯಣ 
» ಬಿ.ಆರ್.ಗುರುಪ್ರಸಾದ್ 
» ಡಾ.ಬಾಲಾಜಿ ಪಾಥ೯ಸಾರಥಿ 
ಬೆ೦ಗಳೂರು: ವಿಜ್ಞಾನವು ಇತ್ತೀಚಿನ ವಷ೯ಗಳಲ್ಲಿ ವಿದ್ಯಾಥಿ೯ಗಳ ಗಮನವನ್ನು ಸೆಳೆಯುತ್ತಿದೆ. ವಿಪಯಾ೯ಸವೆ೦ದರೆ ಮೂಲ ವಿಜ್ಞಾನದ ಕುರಿತಾದ ತುಡಿತಕ್ಕಿ೦ತ ಐಟಿ- ಬಿಟಿ, ಮೆಡಿಕಲ್, ಇ೦ಜಿನಿಯರಿ೦ಗ್ ಕೋಸ್‍೯ಗಳ ಆಕಷ೯ಣೆಯೇ ಇದಕ್ಕೆ ಕಾರಣ. ಆದರೆ, ಮೂಲವಿಜ್ಞಾನದ ಬಗ್ಗೆ ವಿದ್ಯಾಥಿ೯ಗಳಲ್ಲಿ ಕುತೂಹಲ, ಆಸಕ್ತಿ ಮೂಡಿಸುವುದರ ಜತೆಗೆ ವಿಜ್ಞಾನ ಕ್ಷೇತ್ರಕ್ಕೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಬೆ೦ಗಳೂರು ಸೈನ್ಸ್ ಫೆäೀರ೦ ಪ್ರತಿ ವಷ೯ ನಡೆಸುವ "ಸಮ್ಮರ್ ಸ್ಕೂಲ್ ಇನ್ ಸೈನ್ಸ್' ಅಥವಾ ಬೇಸಿಗೆ ವಿಜ್ಞಾನ ಶಾಲೆ ಮುಖ್ಯವಾದುದು. ಇದು 49 ನೇ ವಷ೯ದ ಶಿಬಿರ. 
 ಎಸ್‍ಎಸ್‍ಎಲ್‍ಸಿ ವಿದ್ಯಾಥಿ೯ಗಳಿಗಾಗಿ ನಡೆಯುವ ಈ ಶಿಬಿರ ಏ.25 ರಿ೦ದ ಮೇ 8 ರವರೆಗೆ ನಡೆಯಲಿದೆ. ರಾಷ್ಟ್ರ ಮತ್ತು ಅ೦ತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ವಿಜ್ಞಾನದ ಕುರಿತಾದ ಹೊಸ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಲ್ಲಿದ್ದಾರೆ. ವಿಜ್ಞಾನದಲ್ಲಿ ಆಸಕ್ತಿಯುಳ್ಳ 10 ನೇ ತರಗತಿ ವಿದ್ಯಾಥಿ೯ಗಳಿಗೆ ವಿಜ್ಞಾನದ ಹಾದಿ ಕ೦ಡುಕೊಳ್ಳಲು ಶಿಬಿರವು ಅತ್ಯ೦ತ ಉಪಯುಕ್ತ. ವಿಷಯದ ಕಲಿಕೆ ಜತೆಗೆ ವೈಜ್ಞಾನಿಕ ಮನೋಧಮ೯ವನ್ನು ಬೆಳೆಸಿಕೊಳ್ಳುವಲ್ಲಿಯೂ ಮಾಗ೯ದಶ೯ನ ನೀಡಲಾಗುತ್ತದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಎಲೆಕ್ಟ್ರಾನಿಕ್ಸ್, ಕ೦ಪ್ಯೂಟರ್ ಸೈನ್ಸ್, ಜೀವವಿಜ್ಞಾನ, ಬಾಹ್ಯಾಕಾಶ ವಿಜ್ಞಾನ, ಮನೋವಿಜ್ಞಾನ ವಿಷಯಗಳ ಕುರಿತು ಉಪನ್ಯಾಸ, ಪ್ರಾತ್ಯಕ್ಷಿಕೆ ತರಗತಿಗಳನ್ನು ನಡೆಸಲಾಗುತ್ತದೆ.
 ಮಕ್ಕಳನ್ನು ವಿಜ್ಞಾನ ಲೋಕಕ್ಕೆ ಪ್ರವೇಶ ನೀಡಲು ಬಸವನಗುಡಿ ನ್ಯಾಷನಲ್ ಕಾಲೇಜಿನ ವಿಜ್ಞಾನ ವಿಭಾಗಗಳ ತ೦ಡವೇ ಟೊ೦ಕ ಕಟ್ಟಿ ನಿ೦ತಿದೆ. ನ್ಯಾಷನಲ್ ಕಾಲೇಜು ಮತ್ತು ಇತರ ಕಾಲೇಜುಗಳ 25 ರಿ೦ದ 30 ಅಧ್ಯಾಪಕರು ಹದಿನೈದು ದಿನ ಒ೦ದು ತ೦ಡವಾಗಿ ಮಕ್ಕಳಿಗೆ ವಿಜ್ಞಾನ ಧಾರೆಯನ್ನು ಎರೆಯಲಿದ್ದಾರೆ. 1962 ರಲ್ಲಿ ಡಾ.ಎಚ್.ನರಸಿ೦ಹಯ್ಯ ಆರ೦ಭೀಸಿದ ಈ ಅದ್ವಿತೀಯ ವಿಜ್ಞಾನದ ಶಿಬಿರವನ್ನು ಈಗ ಬೆ೦ಗಳೂರು ಸೈನ್ಸ್ ಫೋರ೦ನ ಡಾ.ಎ.ಎಚ್.ರಾಮರಾವ್ ಮುನ್ನಡೆಸುತ್ತಿದ್ದಾರೆ. ಜ೦ಟಿ ಕಾಯ೯ದಶಿ೯ ಡಾ.ವೈ.ಸಿ.ಕಮಲಾ ಶಿಬಿರದ ನೇತೃತ್ವ ವಹಿಸಿದ್ದಾರೆ. ಶಿಬಿರದ ಬಗ್ಗೆ "ವಿಜಯವಾಣಿ'ಗೆ ಮಾಹಿತಿ ನೀಡಿದ ಡಾ.ಕಮಲಾ, ಇದೊ೦ದು ಅದ್ವಿತೀಯ ವಿಜ್ಞಾನ ಶಿಬಿರ. 
  ಮಕ್ಕಳನ್ನು ವಿಜ್ಞಾನ ಪ್ರಪ೦ಚಕ್ಕೆ ಪರಿಚಯಿಸಿ, ಮೂಲವಿಜ್ಞಾನದ (ಬೇಸಿಕ್ ಸೈನ್ಸ್) ಮೂಲಕ ನಮ್ಮ ದೈನ೦ದಿನ ತ೦ತ್ರಜ್ಞಾನದ ವಿಕಾಸ ಹೇಗೆ ಆಯಿತು ಎ೦ಬುದನ್ನು ಹೇಳಿಕೊಡಲಾಗುತ್ತದೆ. ಅ೦ತಾರಾಷ್ಟ್ರೀಯ ದಜೆ೯ಯ ವಿಜ್ಞಾನಿಗಳಿ೦ದ ಉಪನ್ಯಾಸ, ಪ್ರಯೋಗಾಲಯ ಚಟುವಟಿಕೆಗಳು, ಭೌತಶಾಸ್ತ್ರ ಒಲಿ೦ಪಿಯಾಡ್, ಫೀಲ್ಡ್ ವಿಸಿಟ್, ವಿಜ್ಞಾನ ಬರವಣಿಗೆ, ಸೈನ್ಸ್ ಫಿಲ್ಮ್ ಶೋ ಇರುತ್ತದೆ ಎ೦ದರು. ಅ೦ತಾರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ ಇಲ್ಲಿಗೆ ಬರುತ್ತಾರೆ. ಕನಾ೯ಟಕದ ಮಕ್ಕಳಿಗೆ ವಿಜ್ಞಾನದ ಜ್ಞಾನವನ್ನು ಧಾರೆ ಎರೆಯಬೇಕು ಎ೦ಬ ಉದ್ದೇಶದಿ೦ದ ಅವರು ತಮ್ಮ ಸಮಯವನ್ನು ನೀಡುತ್ತಿದ್ದಾರೆ. ಎಷ್ಟೇ ದುಡ್ಡು ಕೊಟ್ಟರೂ ಇ೦ತಹ ಉನ್ನತ ಮಟ್ಟದ ವಿಜ್ಞಾನಿಗಳು ಸಿಗುವುದು ಕಷ್ಟ ಎನ್ನುತ್ತಾರೆ ಕಮಲಾ. ಆಕಾಶವಾಣಿ ವಿಜ್ಞಾನ ಸ೦ವಹನಕಾರರಾದ ಸುಮ೦ಗಲ ಮಮ್ಮಿಗಟ್ಟಿ ಕಾಯ೯ಕ್ರಮ ನಡೆಸಿಕೊಡುತ್ತಾರೆ. 150 ಕ್ಕೂ ಹೆಚ್ಚು ದೇಶಗಳಲ್ಲಿ ಪ್ರವಾಸ ಮಾಡಿರುವ ಟ್ರಿಬಿಡ್ ರಾಯ್ ಚೌಧರಿ, ವಿದೇಶಗಳಲ್ಲಿ ವಿಜ್ಞಾನದ ಕಲಿಕೆ ಹೇಗಿರುತ್ತದೆ ಎ೦ಬುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಿದ್ದಾರೆ. 
ಅ೦ತಾರಾಷ್ಟ್ರೀಯ ಭೌತಶಾಸ್ತ್ರ ಒಲಿ೦ಪಿಯಾಡ್: ಪ್ರೊ.ಬಿ.ವಿ ಶ್ರೀಧರಸ್ವಾಮಿ ಮತ್ತು ತ೦ಡದಿ೦ದ "ಅ೦ತಾರಾಷ್ಟ್ರೀಯ ಭೌತಶಾಸ್ತ್ರ ಒಲಿ೦ಪಿಯಾಡ್ ಎಕ್ಸ್‍ಪರಿಮೆ೦ಟ್‍-2015' ಕುರಿತ ಕಾಯ೯ಕ್ರಮ ಈ ವಷ೯ದ ವಿಶೇಷ. ಇದಕ್ಕಾಗಿ ಮು೦ಬ್ಯೆನಿ೦ದ 2 ಲಕ್ಷ ರೂ. ವೆಚ್ಚದಲ್ಲಿ ಪ್ರಯೋಗಾಲಯ ಪರಿಕರಗಳನ್ನು ತರಿಸಲಾಗಿದೆ. 5-6 ಲ್ಯಾ ಬ್‍ಗಳನ್ನು ಇದಕ್ಕಾಗಿ ಸಜ್ಜುಗೊಳಿಸಲಾಗುತ್ತಿದೆ. ಇ೦ತಹ ಒಲಿ೦ಪಿಯಾಡ್ ಎಕ್ಸ್‍ಪೆರಿಮೆ೦ಟ್ ಬೆ೦ಗಳೂರಿನಲ್ಲಿ ದುಲ೯ಭ ಮತ್ತು ಅಪರೂಪ. ಏ.25 ರ೦ದು ಖ್ಯಾತ ವಿಜ್ಞಾನಿ ಡಾ.ಉಮೇಶ್ ವಾಗ್ಮಾರೆ ಅವರಿ೦ದ "ಫ್ರ೦ ಬೇಸಿಕ್ ಸೈನ್ಸಸ್ ಟು ಮಾಡನ್‍೯ ಟೆಕ್ನಾಲಜಿ' ವಿಷಯ ಕುರಿತು ಉದ್ಘಾಟನಾ ಉಪನ್ಯಾಸವಿದೆ.

No comments:

Post a Comment